08258 - 295702, 7406241166, 6363368992
floriculturecs.karkala@gmail.com
GROW WITH US
ನಮ್ಮೊಂದಿಗೆ ಬೆಳೆಯಿರಿ
ಹೂವಿನ ಬೆಳೆಗಾರರ ಸಹಕಾರ ಸಂಘವು ನಿ. ಕಾರ್ಕಳ ತಾಲೂಕು ಮಟ್ಟದ ಸಹಕಾರ ಸಂಘವು ಕಾರ್ಕಳದಲ್ಲಿ ಆರಂಭವಾಗಿದ್ದು ಇದೀಗ ಜಿಲ್ಲಾ ಮಟ್ಟದ ಮಾನ್ಯತೆ ಪಡೆದ ಸಹಕಾರ ಸಂಘವಾಗಿದೆ ಈ ಸಹಕಾರ ಸಂಘವು ಹೂವಿನ ಬೆಳೆಗಾರರಿಗೆ ಎಲ್ಲ ವಿಧದಲ್ಲಿ ಸಹಕಾರಿಯಾಗುವುದು ಹಾಗು ಸಹಕಾರ ಸಂಘವು ಹೂವಿನ ಬೆಳೆಗಾರರ ಮತ್ತು ಸರಕಾರದ ನಡುವೆ ಕೊಂಡಿಯಾಗಿ ಸರಕಾರದಿಂದ ಕಾಲಕಾಲಕ್ಕೆ ಸಿಗುವ ಸವಲತ್ತನ್ನು ತಮಗೆ ದೊರಕಿಸಿಕೊಳಲ್ಲಲು ಶ್ರಮಿಸುವುದು ಮತ್ತು ಕಾಲಕಾಲಕ್ಕೆ ಬೆಳೆಗಾರರಿಗೆ ಗಿಡ, ಬೆಳೆ, ನಿರ್ವಹಣೆಗೆ ಬೇಕಾದ ಮಾಹಿತಿ ಕೀಟನಾಶಕ ಧನ ಸಹಾಯ ಒದಗಿಸುವುದು ಮುಂತಾದ ಸಮಾಜದ ಕೆಲಸಗಳನ್ನು ನೆರವೇರಿಸಿ ಸದಸ್ಯರ ಅಭಿವೃದ್ಧಿಗೆ ಶ್ರಮಿಸುವುದು.

ಕರ್ನಾಟಕ ರಾಜ್ಯದಲ್ಲಿ ಹೂವಿನ ಬೆಳೆಗಾರರ ಸಹಕಾರ ಸಂಘದ ಆಲೋಚನೆಯು ಪ್ರಪ್ರಥಮದ್ದಾಗಿರುತ್ತದೆ ನಾವು ಹೂವಿನ ಬೆಳೆಗಾರರ ಕಷ್ಟ ನಷ್ಟ ಸಂಕಷ್ಟಗಳನ್ನು ಸರಕಾರದ ಗಮನಕ್ಕೆ ತಂದು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಬೆಳೆಗಾರರಿಗೆ ತಲುಪಿಸುವಲ್ಲಿ ಮುತುವರ್ಜಿ ವಹಿಸುತ್ತದೆ.

ಹೂವಿನ ಬೆಳೆಗಾರರಿಗೆ ಸಕಾಲದಲ್ಲಿ ಹೂವಿನ ಗಿಡ, ನಾಟಿ ಕ್ರಮ, ಆರೈಕೆ, ಕಾಯಿಲೆ, ಮದ್ದು, ವ್ಯಾಪಾರ ವ್ಯವಹಾರದ ಬಗ್ಗೆ ಕಾಲ ಕಾಲಕ್ಕೆ ನಿಯಮಿತವಾಗಿ ಲಭ್ಯ ಮಾಧ್ಯಮಗಳ ಮುಖಾಂತರ ಸೂಕ್ತ ಮಾಹಿತಿಯನ್ನು ಒದಗಿಸುವ ಕೆಲಸವನ್ನು ಮಾಡುತ್ತೇವೆ.

ಎಲ್ಲಾ ವರ್ಗದ ಜನಸಾಮಾನ್ಯರಿಗಾಗಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತೇವೆ ಹೂವಿನ ಬೆಳೆಗಾರರ ಸಹಕಾರ ಸಂಘವು ದಿನಾಂಕ 17-03-2021 ರಂದು ಉದ್ಘಾಟನೆಗೊಂಡು ಉತ್ತಮವಾದ ಸೇವೆಯನ್ನು ಒದಗಿಸುತ್ತ ಬರುತ್ತಿದೆ. ನಮ್ಮ ಸಹಕಾರ ಸಂಘವು ಸದಸ್ಯರ ನಡುವೆ ಮಿತವ್ಯಯ ಪರಸ್ಪರ ಸ್ವ ಸಹಾಯ ಮತ್ತು ಸಹಕಾರದ ಮನೋಭಾವನೆಯ ಅಭ್ಯಾಸವನ್ನು ಉತ್ತೇಜಿಸಲು ಹಾಗು ನಿಯಮಿತ ಉಳಿತಾಯವನ್ನು ಉತ್ತೇಜಿಸಲು ಹಾಗು ಉತ್ಪಾದಕ ಉದ್ದೇಶ ಹೊಂದಿರುವ ಸದಸ್ಯರಿಗೆ ಅವರ ಅಗತ್ಯಗಳಿಗೆ ಅನುಸಾರವಾಗಿ ಸಾಲವನ್ನು ಒದಗಿಸುವ ಕೆಲಸವನ್ನು ನಿರ್ವಹಿಸುತ್ತೇವೆ.

Home
About Us
Deposits
Loan
Plants
Medicines
Flowers
Gallery
News
Jobs
Contact Us
ನಮ್ಮ ಸಂಸ್ಥೆಯ ಉದ್ದೇಶಗಳು
  • ಕೃಷಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಭಾವನೆಯನ್ನು ಪ್ರೋತ್ಸಾಹಿಸುವುದು
  • ಸರಕಾರ ಮತ್ತು ಜನರ ನಡುವೆ ಕಾರ್ಯ ನಿರ್ವಹಿಸುವುದು
  • ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು
  • ಬ್ಯಾಂಕಿಂಗ್ ವ್ಯವಹಾರವನ್ನು ನಿರ್ವಹಿಸುವುದು
  • ಮೊದಲ ದಿನದಿಂದ ಅತ್ತ್ಯುನ್ನತ ಗಣಕೀಕೃತ ತಂತ್ರಾಂಶ ಮತ್ತು ತಂತ್ರಜ್ಞಾನ ಬಳಸಿ ಕಾರ್ಯ ನಿರ್ವಹಣೆ
  • ಹೂವಿನ ಗಿಡಗಳ ನಾಟಿಕ್ರಮ, ಆರೈಕೆಯ ಬಗ್ಗೆ ಕಾಲ ಕಾಲಕ್ಕೆ ಸರಿಯಾಗಿ ಬೇರೆ ಬೇರೆ ಮಾಧ್ಯಮ, ವೆಬ್ ಸೈಟ್, ಯು ಟ್ಯೂಬ್ ಚಾನೆಲ್, ವಾಟ್ಸಾಪ್, ಕರಪತ್ರ, ಸೆಮಿನಾರ್ ಮೂಲಕ ಜನರಿಗೆ ಮಾಹಿತಿ ನೀಡುತ್ತೇವೆ
  • ಹೂವಿನ ಕೃಷಿ ಬಗ್ಗೆ ಉತ್ಸಾಹ ನೀಡಲು ಪೂರಕ ಶಿಕ್ಷಣ ಮತ್ತು ತರಬೇತಿ
  • ಆಸಕ್ತ ಬೆಳೆಗಾರರಿಗೆ ಸಕಾಲದಲ್ಲಿ ಗಿಡ, ಬೀಜಗಳನ್ನು ಒದಗಿಸುವುದು
  • ಬೆಳೆಗೆ ಬೇಕಾದ ಔಷದ, ಕೀಟನಾಶಕ ಸಿಂಪಡಣೆ, ದಾಸ್ತಾನು, ಸಾಮಗ್ರಿಗಳನ್ನು ಒದಗಿಸುತ್ತೇವೆ
ಸೊಸೈಟಿಯಿಂದ ಸಿಗುವ ಲಾಭ
  • ಸೊಸೈಟಿಯು ಎಲ್ಲಾ ತರಹದ ಠೇವಣಿ ಹಾಗು ಸಾಲ ಸೌಲಭ್ಯವನ್ನು ಒದಗಿಸುತ್ತದೆ
OUR PRESIDENTS AND DIRECTORS
Mr. Francis Dsouza

President
7406241166
Mr. Naveen Shenoy

Vice President
9008871817
Mrs. Flavia Aranha

Director
9880156218
Mrs. Flora Mendonca

Director
9980898179
Mr. Jhon Tellis

Director
9900333240
Mrs. Lavita Cardoza

Director
9448669554
Mr. Ramesh B. Nitte

Director
9449947343
Mr. Shashikanth Bhat

Director
9964213963
Mr. Uday V. Shetty

Director
8861036111
Mr. Venkataramana Sharma

Director
9845398150
Mrs. Vidyalakshmi

Director
9880220248
Mrs. Yashoda Moily

Director
9845325796
OUR STAFFS
Kum. Latha

Secretory
Mrs. Veena Rajesh

Staff
Kum. Rachitha M.

Staff